ಗುರುವಾರ, ಡಿಸೆಂಬರ್ 22, 2011

"ಕಿಟ್ಟಿ ಕತೆ"


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯದೊಂದಿಗೆ
ಸಮುದಾಯ ಶಿವಮೊಗ್ಗ (ರಿ)
ಅರ್ಪಿಸುವ ನಾಟಕ
"ಕಿಟ್ಟಿ ಕತೆ"
ರಚನೆ: ಶ್ರೀ ಚಂದ್ರಶೇಖರ ಕಂಬಾರ
ನಿರ್ದೇಶನ: ಶ್ರೀ ಸಾಸ್ವೆಹಳ್ಳಿ ಸತೀಶ್
ಸಹ ನಿರ್ದೇಶನ: ಶ್ರೀ ಕಿರಣ್ ಮಾರಶೆಟ್ಟಿಹಳ್ಳಿ
ಸಂಗೀತ: ಶ್ರೀ ನವಿಲೇಶ್ 
ಸ್ಥಳ: ಸುವರ್ಣ ಸಂಸ್ಕೃತಿ ಭವನ, 
ದಿನಾಂಕ: ೨೫.೧೨.೨೦೧೧ ಭಾನುವಾರ ಸಂಜೆ ೬.೪೫ ಕ್ಕೆ.
ಪ್ರವೇಶ ಉಚಿತ. ದಯಮಾಡಿ ಬನ್ನಿ. 


ಭಾನುವಾರ, ಅಕ್ಟೋಬರ್ 23, 2011

" ಮಿಸ್ಟೇಕ್ "


೨೩.೧೦.೨೦೧೧ ಭಾನುವಾರ  ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗದಲ್ಲಿ ನಡೆದ  ಉಡುಪಿಯ "ರಥಬೀದಿ ಗೆಳೆಯರು" ಅಭಿನಯದ  " ಮಿಸ್ಟೇಕ್ " ನಾಟಕದ ಚಿತ್ರಗಳು.  ಪರಿಕಲ್ಪನೆ - ವಿನ್ಯಾಸ - ನಿರ್ದೇಶನ: ಡಾ. ಶ್ರೀಪಾದ್ ಭಟ್ .


ಗುರುವಾರ, ಅಕ್ಟೋಬರ್ 20, 2011

" ಮಿಸ್ಟೇಕ್ "


ಸಮುದಾಯ ಶಿವಮೊಗ್ಗ (ರಿ) 
ಅರ್ಪಿಸುವ 

 ಉಡುಪಿಯ "ರಥಬೀದಿ ಗೆಳೆಯರು" ಅಭಿನಯದ ನಾಟಕ
" ಮಿಸ್ಟೇಕ್ "
 ( ಸಾದತ್ ಹಸನ್ ಮಾಂಟೋ ಅವರ ಕತೆಗಳ ಆಧಾರಿತ ) 
ಪರಿಕಲ್ಪನೆ - ವಿನ್ಯಾಸ - ನಿರ್ದೇಶನ: ಡಾ. ಶ್ರೀಪಾದ್ ಭಟ್ 

ದಿನಾಂಕ ೨೩.೧೦.೨೦೧೧ ಭಾನುವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ.  ದಯಮಾಡಿ ಬನ್ನಿ.

ಸೋಮವಾರ, ಸೆಪ್ಟೆಂಬರ್ 5, 2011

ವಾರ್ಷಿಕ ಸರ್ವ ಸದಸ್ಯರ ಸಭೆ

ದಿನಾಂಕ ೦೩.೦೯.೨೦೧೧ ರಂದು ನಡೆದ ಸಮುದಾಯ ಶಿವಮೊಗ್ಗದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಸಮುದಾಯದ ಸಮನ್ವಯ ಸಮಿತಿ ಕಾರ್ಯದರ್ಶಿ ಸುರೇಂದ್ರ  ರಾವ್  ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ರಾದ  ಪದ್ಮನಾಭ್ ಹಾಗೂ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ರಾವ್

ಸೋಮವಾರ, ಆಗಸ್ಟ್ 15, 2011

HAPPY INDEPENDENCE DAY


ಸೋಮವಾರ, ಮೇ 23, 2011

ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ

ದಿನಾಂಕ ೨೦.೦೫.೨೦೧೧ ರಂದು ಸಂಜೆ ೫.೦೦ ಗಂಟೆಗೆ ಶಿವಮೊಗ್ಗದಲ್ಲಿ  ನಡೆದ ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ - ಕೆಲವು ಚಿತ್ರಗಳು.




ಶುಕ್ರವಾರ, ಮೇ 20, 2011

ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ


ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ
 ಶಿವಮೊಗ್ಗದಲ್ಲಿ ದಿನಾಂಕ ೨೦.೦೫.೨೦೧೧ ರಂದು ಸಂಜೆ ೫.೦೦ ಗಂಟೆಗೆ,
ಮಕ್ಕಳ ವಿದ್ಯಾಸಂಸ್ಥೆ ಆವರಣ, ಗೋಪಿಸರ್ಕಲ್ ಹತ್ತಿರ, 
ವ್ಯಂಗ್ಯ ಚಿತ್ರ ಪ್ರದರ್ಶನ, ಕವನ ವಾಚನ, ಇತ್ಯಾದಿ., 

ಸೋಮವಾರ, ಮೇ 16, 2011

ಬುಧವಾರ, ಮೇ 11, 2011

"ಕನಸಿನವರು"

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೧೦.೦೫.೨೦೧೧ ಮಂಗಳವಾರ  ಸಮುದಾಯ ತಂಡದಿಂದ.  ಕುವೆಂಪು ರಂಗಮಂದಿರದಲ್ಲಿ. ನಡೆದ ನಾಟಕ  "ಕನಸಿನವರು" ರಚನೆ: ನಾ.ಶ್ರೀನಿವಾಸ್, ನಿರ್ದೇಶನ. ಕೆ.ಜಿ.ವೆಂಕಟೇಶ್



ಮಂಗಳವಾರ, ಮೇ 10, 2011

" ಮಕ್ಕಳ ರವೀಂದ್ರ"


ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೯.೦೫.೨೦೧೧ ಸೋಮವಾರ ಚಿಂತನ  ರೆಪರ್ಟರಿ ಯಿಂದ ನಡೆದ ನಾಟಕ "  ಮಕ್ಕಳ ರವೀಂದ್ರ"

"ಸತ್ರು ಅಂದ್ರೆ ಸಾಯ್ತಾರ"




ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೮.೦೫.೨೦೧೧ ಭಾನುವಾರ ಕುವೆಂಪು ರಂಗಮಂದಿರದಲ್ಲಿ. ನಡೆದ ಸಮುದಾಯ ಶಿಬಿರದ ಮಕ್ಕಳಿಂದ  ನಡೆದ  ನಾಟಕ  "ಸತ್ರು ಅಂದ್ರೆ ಸಾಯ್ತಾರ" .ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ಸಹ ನಿರ್ದೇಶನ: ಶ್ರೀ ಕಿರಣ್. ಸಂಗೀತ: ಶ್ರೀ ಉಮೇಶ್ ಆಚಾರ್ಯ,

ಉಧ್ಘಾಟನೆ

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವವನ್ನು  : ದಿನಾಂಕ ೭.೦೫.೨೦೧೧ ರಂದು ಕುವೆಂಪು ರಂಗಮಂದಿರದಲ್ಲಿ ಸಮುದಾಯದ   ರಾಜ್ಯ ಕಾರ್ಯದರ್ಶಿ ಶ್ರೀ ಸುರೇಂದ್ರ  ಉಧ್ಘಾಟನೆ ಮಾಡಿದರು.

ಸೋಮವಾರ, ಮೇ 9, 2011

"ನಾ ದ್ಯಾವ್ರನ್ ನೋಡ್ಬೇಕು"



ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವ : ದಿನಾಂಕ ೭.೦೫.೨೦೧೧  ಶನಿವಾರ , ಬೆಳಲಕಟ್ಟೆಯ ಸ್ಪಂದನ ತಂಡದಿಂದ  ಕುವೆಂಪು ರಂಗಮಂದಿರದಲ್ಲಿ.ನಡೆದ -   "ನಾ ದ್ಯಾವ್ರನ್ ನೋಡ್ಬೇಕು" ನಾಟಕದ ದೃಶ್ಯ.
ರಚನೆ: ಮಂಜುನಾಥ್,ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ನಿರ್ವಹಣೆ ಅಣ್ಣಪ್ಪ ಒಂಟಿಮಾಳಗಿ


ಬುಧವಾರ, ಏಪ್ರಿಲ್ 27, 2011

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ


ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವ : ದಿನಾಂಕ ೭.೦೫.೨೦೧೧ ರಿಂದ ೧೦.೦೫.೨೦೧೧ರ ವರೆಗೆ
ಕುವೆಂಪು ರಂಗಮಂದಿರದಲ್ಲಿ.
ದಿನಾಂಕ ೦೭.೦೫.೨೦೧೧ ಶನಿವಾರ - "ನಾ ದ್ಯಾವ್ರನ್ ನೋಡ್ಬೇಕು" ಸ್ಪಂದನ ತಂಡದಿಂದ
ದಿನಾಂಕ ೦೮.೦೫.೨೦೧೧ ಭಾನುವಾರ - "ಸತ್ರು ಅಂದ್ರೆ ಸಾಯ್ತಾರ" ಸಮುದಾಯ ಶಿಬಿರದ ಮಕ್ಕಳಿಂದ
ದಿನಾಂಕ ೦೯.೦೫.೨೦೧೧ ಸೋಮವಾರ - "  ಮಕ್ಕಳ ರವೀಂದ್ರ" - ಹೊನ್ನಾವರದ ಚಿಂತನ ತಂಡದಿಂದ
ದಿನಾಂಕ ೧೦.೦೫.೨೦೧೧ ಮಂಗಳವಾರ - "ಕನಸಿನವರು" - ಸಮುದಾಯ ತಂಡದಿಂದ.
ಎಲ್ಲರಿಗೂ ಸ್ವಾಗತ.

ಬೇಸಿಗೆ ರಂಗ ತರಬೇತಿ ಶಿಬಿರ - 2011


ದಿನಾಂಕ ೨೧.೦೪.೨೦೧೧ ರಿಂದ ಡಿ.ವಿ.ಎಸ್. ರಂಗಮಂದಿರದಲ್ಲಿ ಪ್ರಾರಂಭವಾದ ಬೇಸಿಗೆ ರಂಗ ತರಬೇತಿ ಶಿಬಿರದ ದೃಶ್ಯಗಳು. ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ಸಂಪನ್ಮೂಲ ವ್ಯಕ್ತಿಗಳು: ಶ್ರೀ ಉಮೇಶ್ ಆಚಾರ್ಯ, ಶ್ರೀ ಕಿರಣ್.

ಮಂಗಳವಾರ, ಮಾರ್ಚ್ 29, 2011

ಮಂಗಳವಾರ, ಫೆಬ್ರವರಿ 22, 2011

ಶ್ರೀ ಸುರೇಂದ್ರ ರಾವ್ ಭೇಟಿ


ಬೆಂಗಳೂರಿನ ಸಮುದಾಯ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ರಾವ್ ರವರು ಶಿವಮೊಗ್ಗಕ್ಕೆ  ದಿನಾಂಕ ೨೧.೦೨.೨೦೧೧ ರಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮುದಾಯ ಶಿವಮೊಗ್ಗದ ಸದಸ್ಯರೊಂದಿಗೆ ಮಾತು ಕತೆಯಲ್ಲಿ ತೊಡಗಿದ್ದ ಚಿತ್ರಗಳು.
 ಕಾರ್ಯದರ್ಶಿ ಕೆ ಲಕ್ಶ್ಮೀನಾರಾಯಣ್ ಸ್ವಾಗತಿಸಿ, ಸಮುದಾಯ ಶಿವಮೊಗ್ಗದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಸಾಗರ, ತೀರ್ಥಹಳ್ಳಿಗಳಲ್ಲಿ ಸಮುದಾಯದ ಘಟಕ ಪ್ರಾರಂಭಿಸುವುದಕ್ಕೆ ನಡೆದಿರುವ ಪ್ರಯತ್ನದ ಬಗ್ಗೆ ತಿಳಿಸಿದರು. ಅಧ್ಯಕ್ಷರಾದ ಶ್ರೀ ಪದ್ಮನಾಭ ರವರು ಅಧ್ಯಕ್ಷತೆ ವಹಿಸಿದ್ದರು.

 ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಸಮುದಾಯದ ಮುಂದಿರುವ ಸವಾಲುಗಳು, ಅವಕಾಶಗಳ ಬಗ್ಗೆ ಸುರೇಂದ್ರ ವಿವರಿಸಿದರು. ಸಮುದಾಯ ಶಿವಮೊಗ್ಗದ ಸಂಘಟನೆ,  ಶಿಸ್ತು ,ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಚಿತ್ರ ಸಮುದಾಯ, ಸಾಹಿತ್ಯ ಸಮುದಾಯ, ಬಾಲ ಸಮುದಾಯ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಲಹೆ ನೀಡಿದರು. ಕಾರ್ಯ ಕ್ಷೇತ್ರ ವಿಸ್ತ್ರರಣೆಯ ಅಗತ್ಯದ ಬಗ್ಗೆ ವಿವರಿಸಿದರು.


ಮಂಗಳವಾರ, ಫೆಬ್ರವರಿ 8, 2011

"ಯಯಾತಿ" ನಾಟಕ


ದಿನಾಂಕ ೦೬.೦೨.೨೦೧೧ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ "ಯಯಾತಿ" ನಾಟಕದ ದೃಶ್ಯ. ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಎಸ್. ಮಾಲತಿ ಸಾಗರ. ಅಭಿನಯಿಸಿದವರು- ನಟ ಮಿತ್ರರು (ರಿ) ತೀರ್ಥಹಳ್ಳಿ.

ರಂಗದ ಮೇಲೆ:
ಶಿಲ್ಪ ಸುಬ್ರಮಣ್ಯ, ಪೂಜಾ ಪಿ ಶೆಣೈ, ಕೀರ್ತಿ ಕೆ ಪ್ರಭು, ಸ್ವಾತಿ ಎ. ಸಂದೇಶ್ ಜವಳಿ, ನೀಲೇಶ್ ಜವಳಿ.
ನೇಪಥ್ಯ:
ಸಂಗೀತ: ಕೆ.ನಾಗರಾಜ್, ಎಂ.ಪಿ.ಹೆಗಡೆ, ಹೆಗ್ಗೋಡು, 
ವಿಭಾ ಪ್ರಕಾಶ್ ರಾವ್, ಪಿ.ವಿ. ಅರುಂಧತಿ,
ರಂಗ, ವಸ್ತ್ರ ವಿನ್ಯಾಸ, ಪ್ರಾಸಾದನ: ಪುರುಷೋತ್ತಮ ತಲವಾಟ.
ಬೆಳಕು: ಪಿ.ವಿ.ಗುರುರಾಜ್, ಪ್ರವೀಣ್ ಹಾಲ್ಮತ್ತೂರ್.

ಗುರುವಾರ, ಜನವರಿ 20, 2011

ಯಯಾತಿ - ನಾಟಕ




 ಸಮುದಾಯ ಶಿವಮೊಗ್ಗ (ರಿ) 
ಅರ್ಪಿಸುವ 
ನಟ ಮಿತ್ರರು (ರಿ) ತೀರ್ಥಹಳ್ಳಿ ಅಭಿನಯಿಸುವ ನಾಟಕ
ಯಯಾತಿ
ರಚನೆ: ಶ್ರೀ ಗಿರೀಶ್ ಕಾರ್ನಾಡ್
ನಿರ್ದೇಶನ: ಶ್ರೀಮತಿ ಎಸ್. ಮಾಲತಿ, ಸಾಗರ.
ದಿನಾಂಕ:೬.೦೨.೨೦೧೧, ಭಾನುವಾರ  ಸಂಜೆ ೬.೪೫ ಕ್ಕೆ.
ಸ್ಥಳ: ಕರ್ನಾಟಕ ಸಂಘ, ಶಿವಮೊಗ್ಗ.
ಪ್ರವೇಶ ಶುಲ್ಕ ರೂ.೨೦/-
------