ಮಂಗಳವಾರ, ಫೆಬ್ರವರಿ 22, 2011

ಶ್ರೀ ಸುರೇಂದ್ರ ರಾವ್ ಭೇಟಿ


ಬೆಂಗಳೂರಿನ ಸಮುದಾಯ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ರಾವ್ ರವರು ಶಿವಮೊಗ್ಗಕ್ಕೆ  ದಿನಾಂಕ ೨೧.೦೨.೨೦೧೧ ರಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮುದಾಯ ಶಿವಮೊಗ್ಗದ ಸದಸ್ಯರೊಂದಿಗೆ ಮಾತು ಕತೆಯಲ್ಲಿ ತೊಡಗಿದ್ದ ಚಿತ್ರಗಳು.
 ಕಾರ್ಯದರ್ಶಿ ಕೆ ಲಕ್ಶ್ಮೀನಾರಾಯಣ್ ಸ್ವಾಗತಿಸಿ, ಸಮುದಾಯ ಶಿವಮೊಗ್ಗದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಸಾಗರ, ತೀರ್ಥಹಳ್ಳಿಗಳಲ್ಲಿ ಸಮುದಾಯದ ಘಟಕ ಪ್ರಾರಂಭಿಸುವುದಕ್ಕೆ ನಡೆದಿರುವ ಪ್ರಯತ್ನದ ಬಗ್ಗೆ ತಿಳಿಸಿದರು. ಅಧ್ಯಕ್ಷರಾದ ಶ್ರೀ ಪದ್ಮನಾಭ ರವರು ಅಧ್ಯಕ್ಷತೆ ವಹಿಸಿದ್ದರು.

 ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಸಮುದಾಯದ ಮುಂದಿರುವ ಸವಾಲುಗಳು, ಅವಕಾಶಗಳ ಬಗ್ಗೆ ಸುರೇಂದ್ರ ವಿವರಿಸಿದರು. ಸಮುದಾಯ ಶಿವಮೊಗ್ಗದ ಸಂಘಟನೆ,  ಶಿಸ್ತು ,ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಚಿತ್ರ ಸಮುದಾಯ, ಸಾಹಿತ್ಯ ಸಮುದಾಯ, ಬಾಲ ಸಮುದಾಯ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಲಹೆ ನೀಡಿದರು. ಕಾರ್ಯ ಕ್ಷೇತ್ರ ವಿಸ್ತ್ರರಣೆಯ ಅಗತ್ಯದ ಬಗ್ಗೆ ವಿವರಿಸಿದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ