ಸೋಮವಾರ, ಮಾರ್ಚ್ 10, 2014

Mahila Dinacharane 8.3.14

ಸಮುದಾಯ ಶಿವಮೊಗ್ಗ (ರಿ)
ನಂ.90, ಸುರಭಿ, ಕೋಟೆ ಅಂಚೆ ಕಛೇರಿ ರಸ್ತೆ, ಶಿವಮೊಗ್ಗ.

ಪತ್ರಿಕಾ ವರದಿ:
ವಿಷಯ: ಸಮುದಾಯ ಶಿವಮೊಗ್ಗದಿಂದ ಮಹಿಳಾ ದಿನಾಚರಣೆ.
ದಿನಾಂಕ 8.3.2014 ರಂದು ಮಲ್ಲೇಶ್ವರ ನಗರದ ಶ್ರೀಮತಿ ಕೆ.ಎಸ್.ನಾಗರತ್ನ ಕೊಡಕ್ಕಲ್ ಶಿವಪ್ರಸಾದರ ಮನೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹೆಚ್. ನಾಗವೇಣಿ ಯವರ 'ಗಾಂಧಿ ಬಂದ' ಕೃತಿಯ ಪರಿಚಯ ಹಾಗೂ ವಿಶೇಷ ಮಹಿಳಾ ಸಾಧಕರಾದ  ಶ್ರೀಮತಿ ಕೆ.ಎಸ್. ನಾಗರತ್ನ ಇವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. 'ಗಾಂಧಿ ಬಂದ' ಕೃತಿಯ ಬಗ್ಗೆ ಮಾತನಾಡಿದ ಉಪನ್ಯಾಸಕರಾದ ಹೆಚ್.ಟಿ. ಕೃಷ್ಣಮೂತರ್ಿ ಯವರು ಇತ್ತೀಚಿನ ಮಹಿಳಾ ಸಾಹಿತಿಗಳಲ್ಲಿ ನಾಗವೇಣಿ ತಮ್ಮ ಧೈರ್ಯ, ಸೂಕ್ಷತೆ, ಹಾಗೂ ಸಾಮಾಜಿಕ ಕಳಕಳಿಯಿಂದಾಗಿ  ಅಭಿನಂದನಾರ್ಹರು ಎಂದು ತಿಳಿಸಿದರು. ನಾಗವೇಣಿಯವರು ಕನರ್ಾಟಕದ ಕರಾವಳಿಯ ಸೂಕ್ಷತೆಗಳನ್ನೆಲ್ಲ ತಮ್ಮ 'ಗಾಂಧಿ ಬಂದ' ಹಾಗೂ ತಮ್ಮ ಇತರ ಕೃತಿಗಳಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಎಂಬುದನ್ನು ವಿವರಿಸಿದರು.ಅನೇಕ ತಿಂಡಿ ತಿನಿಸುಗಳ ತಯಾರಿಕೆಯ ಸೊಗಸನ್ನು ವಿವರಿಸುತ್ತಾ ಅದನ್ನು ಪಡೆಯುವಾಗಿನ ಕೆಳೆವರ್ಗದ ದೈನ್ಯತೆಯ ಪ್ರಸಂಗವನ್ನು ತರುವುದು ನಾಗವೇಣಿಯವರ ವೈಶಿಷ್ಟ್ಯ.  ಕರಾವಳಿಯಲ್ಲಿ ಜಾತಿ ಜಾತಿ ಹಾಗೂ ಜಾತಿ ಮತಗಳ ನಡುವೆ ಇದ್ದ ಸೌಹಾರ್ದ ಕ್ರಮೇಣ ದ್ವೇಷ, ಹಿಂಸೆಗಳಾಗಿ ಬದಲಾಗುತ್ತಿರುವುದನ್ನು ನಾಗವೇಣಿಯವರು ವಿಷಾದದಿಂದ ತಮ್ಮ ಕೃತಿಗಳಲ್ಲಿ ಎತ್ತಿ ತೋರಿಸುವುದರಷ್ಟಕ್ಕೇ ಸೀಮಿತವಾಗದೆ, ಕರಾವಳಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯಂದು ಜೀವ ವಿಮಾ ನಿಗಮದ ಉದ್ಯೋಗಿಯಾದ ಶ್ರೀಮತಿ ಕೆ.ಎಸ್.ನಾಗರತ್ನ ಅವರು ವಿಶೇಷ ಶಕ್ತಿಯ ಮಹಿಳೆ. ಇವರನ್ನು  ಸನ್ಮಾನಿಸುವ ಮೂಲಕ ಶಿವಮೊಗ್ಗ ಸಮುದಾಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಕಾರ್ಯದಶರ್ಿ ಶ್ರೀನಿವಾಸ ತಿಳಿಸಿದರು. ಅವರು ಸ್ಪೂತರ್ಿಯ ಚಿಲುಮೆ, ಉತ್ಸಾಹದ ಬುಗ್ಗೆ. ಅವರು ತಮ್ಮ ಜೀವನೋತ್ಸಾಹದಿಂದಾಗಿ ನಮಗೆಲ್ಲ ಆದರ್ಶಪ್ರಾಯವಾಗಿದ್ದಾರೆ ಎಂದು ಭಾಗವಹಿಸಿದ್ದ ಸದಸ್ಯರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಜಿ.ವೆಂಕಟೇಶ್ ವಹಿಸಿದ್ದರು.  ಕಾರ್ಯದಶರ್ಿ ಶ್ರೀನಿವಾಸ ಸ್ವಾಗತಿಸಿದರು ಹಾಗೂ ಖಚಾಂಚಿ ಕೆ.ಲಕ್ಷ್ಮೀನಾರಾಯಣ ರಾವ್ ವಂದಿಸಿದರು.
ವರದಿ:
ಕಾರ್ಯದಶರ್ಿ, ಸಮುದಾಯ ಶಿವಮೊಗ್ಗ(ರಿ)
 08182-22018