ಸಮುದಾಯದ ಬಗ್ಗೆ
ಸಮುದಾಯ ಶಿವಮೊಗ್ಗ (ರಿ)
-----------------------
ಸಮುದಾಯದ ಸ್ಥಾಪಕ ಅಧ್ಯಕ್ಷ ಶ್ರೀ ಪ್ರಸನ್ನರಿಂದ ೧೯೭೯ ರಲ್ಲಿ ಕೆಲವು ಗೆಳೆಯರ ಭೇಟಿ; ಶಿವಮೊಗ್ಗ ಘಟಕದ ಸ್ಥಾಪನೆ. ೩೦ ವರ್ಷಗಳು ಕಳೆದವು. ಮೊದಲ ೫ ವರ್ಷ ಚಟುವಟಿಕೆ; ಇನ್ನೆರಡು ದಶಕಗಳಲ್ಲಿ ನಿಷ್ಕ್ರಿಯತೆ; ಈಗೈದು ವರ್ಷಗಳಿಂದ ಪುನ: ಕ್ರಿಯಾಶೀಲತೆ.
ಕುಂಬಲಗೋಡಿನ ಕಾರ್ಯಾಗಾರದಲ್ಲಿ ಪ್ರಸನ್ನರಿಂದ ನಿರ್ಮಿತ ನಾಟ್ಕಗಳು "ಮೂರು ತುಣುಕುಗಳು" ಎಂಬ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಅರ್ಪಣೆ. ಶಿವಮೊಗ್ಗ ಜನತೆಗೆ ಮೊತ್ತ ಮೊದಲ ಬಾರಿ ಬೀದಿ ನಾಟಕಗಳ ಪರಿಚಯ.
ಕರ್ನಾಟಕ ರಾಜ್ಯಾದ್ಯಂತ್್ ಜಾತಾದಲ್ಲಿ ಶಿವಮೊಗ್ಗ ಘಟಕ ಪ್ರತಿನಿಧಿಸಿದೆ. ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿದೆ. ನಂತರ "ರೈತನೆಡೆಗೆ ಜಾಥಾ" . ವಿಶ್ವಶಾಂತಿಗಾಗಿ ನೂರಡಿಯ ವರ್ಣ ಚಿತ್ರದ್ ಜಾಥಾಕ್ಕೆ ಶಿವಮೊಗ್ಗದ್ಲ್ಲಿ ವ್ಯವಸ್ಥೆ, ತಂಡದಲ್ಲಿ ಭಾಗವಹಿಸುವಿಕೆ.
ಸಮುದಾಯ ಬೆಂಗ್ಳೂರಿನ "ಕುರಿ", "ಗೆಲಿಲಿಯೋ" ದಾವಣಗೆರೆಯ "ಮೆರವಣಿಗೆ" ಮುಂತಾದ ನಾಟಕಗಳ ಪ್ರಸ್ತುತಿ. ಸಂಸ್ಕ್ರುತಿ ಇಲಾಖೆಯ ಸಹಕಾರದಿಂದ "ದಂಗೆಯ ಮುಂಚಿನ ದಿನಗಳು" "ಹುಲಿಯ ನೆರಳು" ಇವುಗಳ ಪ್ರಸ್ತುತಿ.
ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ರ ಜನ್ಮ ಶತಾಬ್ದಿ, ೧೮೫೭ ರ್ ವಿಪ್ಲವಕ್ಕೆ ೧೫೦ ವರ್ಷ - ಇವುಗಳ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ದೆಗಳನ್ನು ಹಮ್ಮಿಕೊಂಡಿದ್ದೆವು.
"ಖರೇ ಚರಣದಾಸನೆಂಬ ಕಳ್ಳ" ಮತ್ತು "ರಿಂಗಿನಾಟ" ನಾಟಕಗಳ ಪ್ರಸ್ತುತಿ.
೨೦೦೮-೦೯ ರ್ ಸಾಲಿನಲ್ಲಿ "ಪಾಪು ಬಾಪು ಆದ ಕಥೆ" "ಉಷಾಹರಣ" "ಮನಸುಖರಾಯನ ಮನಸು" - ಈ ಮೂರು ನಾಟಕಗಳನ್ನು ಅರ್ಪಿಸಿದ್ದೇವೆ. (ಪ್ರವೇಶ ಉಚಿತ). ಶ್ರೀಪಾದ್ ಭಟ್ ಹಾಗೂ ಕಿರಣ್ ಭಟ್ ನಿರ್ದೇಶಿತ ಚಿಂತನ ರೆಪರ್ಟರಿಯ "ಹಕ್ಕಿಯ ಹಾಡು" ಮತ್ತು ಬೆಳಕಿನ ಕಡೆಗೆ ಎಂಬ ೨ ಮಕ್ಕಳ ನಾಟಕಗಳನ್ನು ಪ್ರಯೋಗಿಸಲಾಗಿದೆ.
ಮುನ್ನಡೆಯಲು ನಿಮ್ಮ ಬೆಂಬಲ ಬೇಕೆಂಬ ಹಂಬಲದಿಂದ ಆಜೀವ ಪೋಷಕರಾಗಿ ಎಂದು ಮನವಿ ಮಾಡುತ್ತಿದ್ದೇವೆ.
************
ಕಾರ್ಯಕಾರಿ ಸಮಿತಿ:
ಡಾ| ಎಂ.ಆರ್.ಕ್ರಿಷ್ಣಾಜಿ, ಗೌರವಾದ್ಯಕ್ಷರು.
ಶ್ರೀ ಪದ್ಮನಾಭನ್, ಅಧ್ಯಕ್ಷರು,
ಶ್ರೀ ಕೆ.ಲಕ್ಷ್ಮಿನಾರಾಯಣ ರಾವ್, ಕಾರ್ಯದರ್ಶಿ,
ಶ್ರೀಮತಿ ಎ.ವಿ.ಮಮತ, ಖಚಾಂಚಿ,
ಶ್ರೀ ವಿ.ಶ್ರೀನಿವಾಸ, ಜತೆ ಕಾರ್ಯದರ್ಶಿ,
ಶ್ರೀ ಕೆ.ಜಿ.ವೆಂಕಟೇಶ್, ಜತೆ ಕಾರ್ಯದರ್ಶಿ,
ಶ್ರೀ ಕೆ.ಪ್ರಸೀತ್, ಸದಸ್ಯರು,
ಶ್ರೀಮತಿ ಎಸ್.ಬಿ.ನಾಗರತ್ನ, ಸದಸ್ಯರು,
ಶ್ರೀ ಶ್ರೀಧರ ಛಾತ್ರ, ಸದಸ್ಯರು,
ಶ್ರೀಮತಿ ಕೆ. ಆರ್.ರಾಜೇಶ್ವರಿ, ಸದಸ್ಯರು,
ಆಜೀವ ಸದಸ್ಯರ ಸಂಖ್ಯೆ:
ಆಜೀವ ಪೋಷಕರ ಸಂಖ್ಯೆ:
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)